
ನಾಳೆ ನಡೆಯಲಿರೊ ರಂಗನಾಥಸ್ವಾಮಿಯ ಬ್ರಹ್ಮರಥೋಥ್ಸವಕ್ಕೆ ದೇವಾಲಯದ ಆಡಳಿತ ಮಂಡಳಿ ಸಕಲ ರೀತಿಯಲ್ಲೂ ಸಿದ್ದವಾಗಿದೆ ಬೆಳಿಗ್ಗೆ 6 ಗಂಟೆಗೆ ಸೂರ್ಯ ಚಂದ್ರ ಮಂಡಲದ ರಥಸಪ್ತಮಿ ನಡೆಯಲಿದ್ದು


ಪಟ್ಟಣದ ಪ್ರಮುಖ ಬೀದಿಯಲ್ಲಿ ಸೂರ್ಯಚಂದ್ರ ಮಂಡಲದ ಮೆರವಣಿಗೆ ನಡೆಯಲಿದೆ
ಮಧ್ಯಾಹ್ನ 2-30 ಕ್ಕೆ ದೇಗುಲದ ಆವರಣದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದ್ದು

ಬ್ರಹ್ಮ ರಥೋತ್ಸವಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಚಾಲನೆ ನೀಡಲಿದ್ದಾರೆ
ಈ ವೇಳೆ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ದೇವಾಲಯದ ವ್ಯವಸ್ಥಾಪನಾ ಮಂಡಳಿಯವರು ಪಾಲ್ಗೊಳ್ಳಲಿದ್ದಾರೆ,ರಥೋತ್ಸವದ ಹಿನ್ನಲೆಯಲ್ಲಿ
ಕಾಷ್ಠ ರಥಕ್ಕೆ ಸಿಂಗಾರ ಮಾಡಿ ಬಣ್ಣದ ಬಾವುಟಗಳಿಂದ ಅಲಂಕಾರ ಮಾಡಲಾಗಿದೆ
ನಾಳಿನ ರಥೋತ್ಸವ ಕುರಿತಂತೆ ಮಾತನಾಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಹಾಗೂ ಪ್ರಧಾನ ಅರ್ಚಕ ವಿಜಯ ಸಾರಥಿ ಅವರು ನಾಳಿನ ರಥೋತ್ಸವಕ್ಕೆ ಸಂಪ್ರದಾಯದಂತೆ ಬೆಳಗೆಯಿಂದಲೇ ಪೂಜೆ ಪುನಸ್ಕಾರಗಳು ಆರಂಭವಾಗಲಿವೆ.
ರಥೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದು ಬರುವ ಭಕ್ತಾಧಿಗಳಿಗೆ ಪ್ರಸಾದ ವಿನಿಯೊಗದ ವ್ಯವಸ್ಥೆ ಜೊತೆಗೆ ಮೂಲಭೂತ ಸೌಲಭ್ಯವನ್ನೂ ಕಲ್ಪಿಸಲಾಗಿದೆ
ಒಟ್ಟಾರೆ ರಥೋತ್ಸವ ಯಾವುದೇ ರೀತಿಯ ತೊಂದರೆ ಇಲ್ಲದಂತೆ ನಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.









