ಸಂಜೆ ಇಂಪು,ಸುದ್ದಿ ಬೆಂಗಳೂರು: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ರ್ಟಿಯಲ್ ಟೆಕ್ನಾಲಜಿ (ಕೆಐಐಟಿ-ಡಿಯು) ಡೀಮ್ಡ್ ವಿಶ್ವವಿದ್ಯಾಲಯವು ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯ ರ್ಯಾಂಕಿಂಗ್ 2026 ನಲ್ಲಿ ಒಡಿಶಾದಲ್ಲಿ ಅಗ್ರಸ್ಥಾನ ಪಡೆದಿದೆ.
ಒಡಿಶಾದಲ್ಲಿನ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲೇ ಕೆಐಐಟಿ-ಡಿಯು ಅತ್ಯುತ್ತಮ ಸ್ಥಾನದಲ್ಲಿದೆ. ವಿವಿಯು ಏಷ್ಯಾದಲ್ಲೇ 294 ನೇ ಸ್ಥಾನ ಪಡೆದಿದೆ. ಇದರಿಂದಾಗಿ ವಿಶ್ವವಿದ್ಯಾಲಯವು ತನ್ನ ಶ್ರೇಷ್ಠತೆಯಲ್ಲಿ ಜಾಗತಿಕ ಖ್ಯಾತಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.ಕೆಐಐಟಿ-ಡಿಯು ರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಿದ್ದು,
ಭಾರತದ ಉನ್ನತ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಎತ್ತರದ ಸ್ಥಾನ ಪಡೆದಿದೆ.
ಪ್ರತಿ ವರ್ಷವು ಕ್ಯೂಎಸ್ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಸಿದ್ಧಪಡಿಸುತ್ತದೆ. ಈ ವರ್ಷ ಕೆಐಐಟಿ-ಡಿಯು ಪೂರ್ವ ಭಾರತದಲ್ಲಿ ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ ಈ ಬಾರಿ 555 ಹೊಸ ವಿಶ್ವವಿದ್ಯಾಲಯಗಳು ಸೇರಿದಂತೆ 1,500 ಕ್ಕೂ ಹೆಚ್ಚು ಏಷ್ಯಾದ ವಿಶ್ವವಿದ್ಯಾಲಯಗಳು ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕಗಳು 2026 ರಲ್ಲಿ ಭಾಗವಹಿಸಿದ್ದವು. ಇತ್ತೀಚೆಗೆ, ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂ ಕಿಂಗ್ 2026 ನಲ್ಲಿಯೂ ಕೆಐಐಟಿ ಭಾರತದ 5ನೇ
ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಸರು ಪಡೆದಿತ್ತು.
ಈ ರ್ಯಾಂ ಕಿಂಗ್ ನಲ್ಲಿ ಪ್ರತಿ ಪತ್ರಿಕೆಗೆ ಉಲ್ಲೇಖಗಳು, ಅಧ್ಯಾಪಕರ ಸಂಶೋಧನಾ ಪ್ರಬಂಧಗಳು, ಶೈಕ್ಷಣಿಕ ಪ್ರಗತಿ, ಅಧ್ಯಾಪಕರು ವಿದ್ಯಾರ್ಥಿ ಅನುಪಾತ, ಪಿ.ಎಚ್.ಡಿ ಪಡೆದಿರುವ ಸಿಬ್ಬಂದಿ,ಅಂತರರಾಷ್ಟ್ರೀಯ ಸಂಶೋಧನಾ ಜಾಲ, ವಿದೇಶಿ ವಿದ್ಯಾರ್ಥಿಗಳು, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ಅಂತರರಾಷ್ಟ್ರೀಯ ಸಿಬ್ಬಂದಿ, ಉದ್ಯೋಗದಾತರ ಖ್ಯಾತಿ, ಮತ್ತಿತರರ ಮಾನದಂಡಗಳನ್ನು ಆಧರಿಸಿ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಸರು ನೀಡಲಾಗಿದೆ. ವಿವಿಯ ಸಾಧನೆಗೆ ಅತೀವ ಖುಷಿ ವ್ಯಕ್ತ ಪಡಿಸಿರುವ ಕೆಐಐಟಿ, ಕೆಐಎಸ್ ಮತ್ತು ಕೆಐಎಂಎಸ್ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು, “ ನಿರಂತರ ಪ್ರಯತ್ನಗಳು ಕೆಐಐಟಿಯ ಶೈಕ್ಷಣಿಕ ಶ್ರೇಷ್ಠತೆಗೆ ಕಾರಣವಾಗಿದ್ದು, ಅದು ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯ ರ್ಯಾಂ ಕಿಂಗ್ ನಲ್ಲಿ ಪ್ರತಿಪಲಿಸುತ್ತಿದೆ. ಇದು ಇಡೀ ಒಡಿಶಾಕ್ಕೆ ಹೆಮ್ಮೆಯ ವಿಷಯ. ನಮ್ಮದು ಕೇವಲ 22 ವರ್ಷ ವಯಸ್ಸಿನ ಯುವ ವಿಶ್ವವಿದ್ಯಾಲಯ. ಆದರೆ ಇದು ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳಲ್ಲಿ ಹೆಸರು ಪಡೆದಿದೆ ಮತ್ತು ಅನೇಕ ಹಳೆಯ ವಿಶ್ವವಿದ್ಯಾಲಯಗಳಿಗೆ ಸಮನಾಗಿದೆ” ಎಂದು ಹೇಳಿದ್ದಾರೆ.









