ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ 90 ಕೋಟಿ ರೂ ವೆಚ್ಚದಲ್ಲಿ ವಿಸಿ ನಾಲೆಯ ಉಪ ನಾಲೆ ಆಧುನೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು,ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿ ನಾಲೆ ಆಧುನೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ವಿಸಿ ನಾಲೆಯ ಉಪ ನಾಲೆ 20 ಕಿಮೀ ಗೂ ಹೆಚ್ಚು ದೂರ ಹರಿಯಲಿದ್ದು 5 ಸಾವಿರ ಎಕರೆಗೂ ಹೆಚ್ಚಿನ ವಿಸ್ತೀರ್ಣಕ್ಕೆ ನೀರು ಹರಿಸಲಿದೆ,ರೈತರ ವ್ಯವಸಾಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿ ನಾಲೆಯ ಆಧುನೀಕರಣ ಮಾಡುವುದಾಗಿ ತಿಳಿಸಿದರು.

ಈ ಬಗೆಗೆ ಇತ್ತೀಚೆಗೆ ಕೆ ಆರ್ ಎಸ್ ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದರು.
ಮೈಕ್ರೋ ಫೈನಾನ್ಸ್ ಗಳ ಕಿರುಕುಳ ತಪ್ಪಿಸೊ ನಿಟ್ಟಿನಲ್ಲಿ ಕ್ರಮ ಕೈಗೊಂಡು ನಿಯಾಮವಳಿ ರೂಪಿಸುವಂತೆ ಒತ್ತಾಯಿಸಿ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಅವರು
ಬೆಂಗಳೂರಿನ ಆರ್ ಬಿಐ ಕೇಂದ್ರ ಕಚೇರಿ ಎದುರು ರೈತಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು ಮೈಕ್ರೋ ಪೈನಾನ್ಸ್ ಅನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅನುಕೂಲವಾಗಲಿದೆ ಎಂದೂ ಅವರು ತಿಳಿಸಿದರು.









